29/06/2025
ಹದಿನೈದು ದಿನಗಳ ಅಂತರದಲ್ಲಿ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ.
ಈ ರೀತಿಯ ಸಾವು ಖಂಡಿತಾ ಸಹಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ .
ತಂದೆ ತಾಯಿ ಯನ್ನು ಅನಾಥ ಮಾಡಿದ ಭಗವಂತ ವಿಧಿ ಎಷ್ಟೊಂದು ಕ್ರೂರಿ .
ಚೆನೈಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ದಲ್ಲಿ ಇದ್ದ ಅಕ್ಕ ತಮ್ಮನ ಸಾವಿನ ಅಂತ್ಯಕ್ರಿಯೆ ಗೆ ಆಗಮಿಸಿದ್ದರು .
ಜೂನ್ 26 ರಂದು ಮಂಗಳೂರಿನ ಪಾವಂಜೆ ಸಮೀಪದಲ್ಲಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ತಂದೆ ಮಗಳು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮಳೆಗೆ ಕೋಟ್ ಧರಿಸುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರೊಂದು ಅಪಘಾತ ಮಾಡಿದ್ದು ಗಂಭೀರವಾಗಿ ಗಾಯಗೊಂಡ ಮಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ . ಅವರ ತಂದೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದ್ವಿಚಕ್ರ ವಾಹನ ಸವಾರರಿಗೆ ಒಂದು ಕಿವಿ ಮಾತು ನೀವು ನಿಮ್ಮ ದ್ವಿಚಕ್ರ ವಾಹನ ಪ್ರಯಾಣ ಮಾಡುವಾಗ ಪೋನ್ ಕರೆ ಬಂದಾಗ , ಮುಂದೆ ನಿಮ್ಮ ಗೆಳೆಯರು ಯಾರೇ ಆಗಲಿ ಸಿಕ್ಕಾಗ, ಮಳೆಗಾಲದಲ್ಲಿ ಕೋಟ್ ಧರಿಸುವುದಕ್ಕೆ ಆಗಲಿ ನಿಮ್ಮ ದ್ವಿಚಕ್ರ ವಾಹನ ವನ್ನು ರಸ್ತೆಯಲ್ಲಿ ನಿಲ್ಲಿಸುವಾಗ ರಸ್ತೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸುವ ಅಭ್ಯಾಸ ಮಾಡಿಕೊಳ್ಳಿ . ಯಮರಾಜನ ಕರೆ ಯಾವಾಗ ಬೇಕಾದರೂ ಬರಬಹುದು ಆ ಕರೆಗೆ ಯಾವುದೇ ತಾಂತ್ರಿಕ ಸಮಸ್ಯೆ ಇರುವುದಿಲ್ಲ ಎಚ್ಚರಿಕೆ ಯಿಂದ ಪ್ರಯಾಣ ಮಾಡಿ.