03/04/2025
ಏಪ್ರಿಲ್ 4: ಕನ್ನಡಿಗರ ವಿಜಯೋತ್ಸವ
ಏಪ್ರಿಲ್ 4ನೇ ತಾರೀಖು ಕನ್ನಡಿಗರ ಐತಿಹಾಸಿಕ ವಿಜಯದ ದಿನ! ಈ ಮಹತ್ತ್ವದ ದಿನದಲ್ಲಿ, ನಮ್ಮ ಶ್ರೀಮಂತ ಪರಂಪರೆಯ ಹೆಮ್ಮೆಯ ಚಕ್ರವರ್ತಿ ಪುಲಿಕೇಶಿ ದ್ವಿತೀಯ, ಉತ್ತರ ಭಾರತದ ರಾಜ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಕಾಪಾಡಿದರು.
ನರ್ಮದೆ ನದಿ ತೀರದಲ್ಲಿ ನಡೆದ ಈ ಮಹಾಯುದ್ಧದಲ್ಲಿ, ಪುಲಿಕೇಶಿಯ ದಿಟ್ಟ ತಂತ್ರಗಾರಿಕೆ ಮತ್ತು ಅಪ್ರತಿಮ ಶೌರ್ಯ ಹರ್ಷವರ್ಧನನ ಆಕ್ರಮಣವನ್ನು ತಡೆಹಿಡಿಯಿತು. ಈ ವಿಜಯ ಕನ್ನಡಿಗರ ವೀರತೆ, ಶಕ್ತಿ ಮತ್ತು ಸ್ವಾಭಿಮಾನವನ್ನು ಸಾರುವ ಅದ್ವಿತೀಯ ಘಟನೆ. ಈ ಸಮರದ ನಂತರ, ಉತ್ತರ ಭಾರತದ ಸಿಂಹಾಸನಾಧಿಪತಿಯಾದ ಹರ್ಷವರ್ಧನ ಕನ್ನಡಿಗರಿಗೆ ತಲೆತಗ್ಗಿಸಬೇಕಾಯಿತು.
ಇಂತಹ ಮಹೋನ್ನತ ವಿಜಯವನ್ನು ಕನ್ನಡ ನಾಡು ಮತ್ತು ಜನತೆ ಸದಾ ಗೌರವಿಸಬೇಕು. ಈ ಏಪ್ರಿಲ್ 4 ಕನ್ನಡಿಗರ ಪರಾಕ್ರಮದ ಸಂಕೇತವಾಗಿ, ಹಬ್ಬದಂತೆ ಆಚರಿಸೋಣ! ಪುಲಿಕೇಶಿಯ ದಕ್ಷ ಆಡಳಿತ, ಕನ್ನಡ ನಾಡಿನ ವೈಭವ ಮತ್ತು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನ ಕೊಂಡಾಡೋಣ.
ಇದು ನಮ್ಮ ಇತಿಹಾಸವನ್ನು ಸಂಭ್ರಮಿಸುವ ದಿನ! ಈ ದಿನ ಪರಂಪರೆ, ಭಾಷೆ, ನಾಡು ಮತ್ತು ನುಡಿಯ ಗೌರವವನ್ನು ಸಾರೋಣ. ಪುಲಿಕೇಶಿ ನಮ್ಮ ಗೌರವದ ಸಂಕೇತ, ನಮ್ಮ ಹೃದಯದ ಸ್ಪಂದನ!
ಜಯ ಕನ್ನಡಾಂಬೆ! ಜಯ ಪುಲಿಕೇಶಿ! ಜಯ ಜಯ ಕರ್ನಾಟಕ!! ಜಯ ಜಯ ಚಾಲುಕ್ಯ ಚಕ್ರೇಶ್ವರ.
#ಕನ್ನಡ #ಕನ್ನಡಿಗ #ಕರ್ನಾಟಕ #ಹೆಮ್ಮಯಕನ್ನಡಿಗ & chats
#ದಾವಣಗೆರೆ_ರಾಯಣ್ಣ