29/07/2026
ಗುರು ಬ್ರಹ್ಮಾ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ॥
ಸರ್ವರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. 🌸🙏
ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದ, ಅನುಗ್ರಹ ಮತ್ತು ಕೃಪಾಕಟಾಕ್ಷದಿಂದ ಪ್ರಾರಂಭವಾದ ನಮ್ಮ ಹಳ್ಳಿಮನೆ ಹೋಟೆಲ್, ವಿಜಯಪುರ, ಇಂದು ಯಶಸ್ವಿಯಾಗಿ 8ನೇ ವರ್ಷವನ್ನು ಪೂರೈಸಿ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳೊಂದಿಗೆ ಮುನ್ನಡೆಯುತ್ತಿದೆ.
ಶ್ರೀಗಳ ಆಶೀರ್ವಾದವೇ ನಮ್ಮ ಶಕ್ತಿ, ಅವರ ಮಾರ್ಗದರ್ಶನವೇ ನಮ್ಮ ಸ್ಫೂರ್ತಿ. ದೇವರ ಕೃಪೆ, ಗುರುಗಳ ಅನುಗ್ರಹ ಹಾಗೂ ಗ್ರಾಹಕರ ಅಚಲವಾದ ಪ್ರೀತಿ-ವಿಶ್ವಾಸದಿಂದ ಮುಂದೆಯೂ ಇದೇ ಸೇವಾಭಾವದಿಂದ ಸಾಗುವ ಸಂಕಲ್ಪ ನಮ್ಮದು.
ಶ್ರೀಗಳ ದಿವ್ಯ ಆಶೀರ್ವಾದ ಸದಾ ನಮ್ಮ ಮೇಲಿರಲಿ. ಸರ್ವರಿಗೂ ಒಳಿತು, ಸಮೃದ್ಧಿ ಮತ್ತು ಮಂಗಳವಾಗಲಿ. 🙏